Error message

Notice: Undefined offset: 0 in include() (line 35 of /home/it/www/www-icts/sites/all/themes/riley/templates/views/views-view-fields--related-file-field-collection-view.tpl.php).
Outreach Events
Speaker
ನಾ. ಸೋಮೇಶ್ವರ (ಬೆಂಗಳೂರು)
When
3:00 pm to 5:00 pm Friday, 28 August 2026
Where
ಚಂದ್ರಶೇಖರ್ ಸಭಾಂಗಣ, ICTS
Resources

ಆಹಾರವೇ ಅಮೃತ!... ಆಹಾರವೇ ವಿಷ! ಹಾಗಾಗಿ ನಾವು ಏನನ್ನು ತಿನ್ನಬೇಕು? ಏನನ್ನು ತಿನ್ನಬಾರದು? ನಮಗೆಹಿತವಾದ ಆಹಾರವನ್ನು ಮಿತ ಪ್ರಮಾಣದಲ್ಲಿ ಸೇವಿಸಿದರೆ, ಅದು ಅಮೃತ! ನಮಗೆ ಹಿತವಲ್ಲದ ಆಹಾರವನ್ನು ಮಿತಿಮೀರಿ ಸೇವಿಸಿದರೆ, ಅದುವೇ ನಮಗೆ ವಿಷ! ನಾವು ಬದುಕಲು ಆಹಾರವನ್ನು ಸೇವಿಸಬೇಕೇ ಹೊರತು, ಆಹಾರವನ್ನು ಸೇವಿಸಲು ಬದುಕಬಾರದು. ನಮ್ಮ ಸಮಗ್ರ ಆರೋಗ್ಯದ ಗುಟ್ಟು, ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿದೆ.

ಡಾ. ನಾರಪ್ಪ ಸೋಮೇಶ್ವರ ಅವರು ಕರ್ನಾಟಕದ ಪ್ರಸಿದ್ಧ ವೈದ್ಯರು, ವಿಜ್ಞಾನ ಲೇಖಕರು ಹಾಗೂಜನಪ್ರಿಯ ನಿರೂಪಕರಾಗಿದ್ದಾರೆ. ವೃತ್ತಿಯಿಂದ ವೈದ್ಯರಾಗಿರುವ ಇವರು, ದೂರದರ್ಶನದಚಂದನ ವಾಹಿನಿಯಲ್ಲಿ  ಪ್ರಸಾರವಾಗುವ 'ಥಟ್ ಅಂತ ಹೇಳಿ' ರಸಪ್ರಶ್ನೆ ಕಾರ್ಯಕ್ರಮದನಿರೂಪಕರಾಗಿ  ಕನ್ನಡಿಗರ ಮನೆಮಾತಾಗಿದ್ದಾರೆ. ದೀರ್ಘಕಾಲದಿಂದ ಯಶಸ್ವಿಯಾಗಿನಡೆಯುತ್ತಿರುವ ಈ ಕಾರ್ಯಕ್ರಮವು ಸಾವಿರಾರು ಕಂತುಗಳನ್ನು ಪೂರೈಸಿ 'ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್'ನಲ್ಲಿ ದಾಖಲಾಗಿದೆ. ಸೋಮೇಶ್ವರ ಅವರು ವೈದ್ಯಕೀಯ ಮತ್ತು ವಿಜ್ಞಾನ ವಿಷಯಗಳಕುರಿತು 70ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದು, 'ಜೀವನದಿ' ವೈದ್ಯಕೀಯ ಮಾಸಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಾಮಾನ್ಯ ಜನರಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.

ICTSನಲ್ಲಿ ಜಾಗತಿಕ ಮಟ್ಟದ ವೈಜ್ಞಾನಿಕ ಸಂಶೋಧನೆ ಮತ್ತು ಅತ್ಯುತ್ತಮ ಸಮಾವೇಶಗಳು ನಡೆಯುತ್ತವೆ. ವಿಜ್ಞಾನ ನಮ್ಮ ದೈನಂದಿನ ಅನುಭವದಿಂದ ದೂರವಿರುವ ವಿಷಯವಲ್ಲ. ನಮ್ಮ ದೈನಂದಿನ ಜೀವನ ಮತ್ತು ಪ್ರಕೃತಿಯನ್ನು ಅರ್ಥಮಾಡಿಕೊಳ್ಳುವ ಬುನಾದಿಯೇ ವಿಜ್ಞಾನ. ಇಂತಹ ವಿಚಾರಗಳನ್ನು ಸರಳ ಮತ್ತು ಸಂವಾದಾತ್ಮಕ ರೀತಿಯಲ್ಲಿ ಕನ್ನಡದಲ್ಲಿ ಚರ್ಚಿಸುವುದೇ "ದೈನಂದಿನ‌‌‌ ವಿಜ್ಞಾನ" ಸರಣಿಯ ಪ್ರಮುಖ ಉದ್ದೇಶ. ಈ ಸರಣಿಯಲ್ಲಿ ನೇರ ಪ್ರಯೋಗಗಳು ಮತ್ತು ಕೈಯಾರೆ ಮಾಡುವ ಪ್ರದರ್ಶನಗಳೂ ಒಳಗೊಂಡಿರುತ್ತವೆ.