“ವೈಜ್ಞಾನಿಕ ಮನೋಧರ್ಮ” ವಿಜ್ಞಾನ ಎನ್ನುವುದಕ್ಕಿಂತಲೂ ಅಸ್ಪಷ್ಟವಾದ ಅರ್ಥವಿರುವ ಪದ. ವಿಜ್ಞಾನಕ್ಕೆ ಸಂಬಂಧವೇ ಇಲ್ಲದ ವಿಚಾರಗಳಿಗೂ ಇತ್ತೀಚೆಗೆ ವೈಜ್ಞಾನಿಕ ಎನ್ನುವ ನಾಮವಿಶೇಷಣವನ್ನು ಕೂಡಿಸುವುದನ್ನ ಕಂಡಾಗ, ಈ ಪದದ ಅರ್ಥ ಇನ್ನಷ್ಟು ನಿಗೂಢ ಎನ್ನಿಸುತ್ತದೆ. ಈ ಭಾಷಣದಲ್ಲಿ ವೈಜ್ಞಾನಿಕ ಮನೋಧರ್ಮ ಎಂದರೇನು ಹಾಗೂ ನಾವೆಲ್ಲರೂ ಆ ಮನೋಧರ್ಮವನ್ನು ಏಕೆ ಬೆಳಸಿಕೊಳ್ಳಬೇಕು ಎಂಬುದನ್ನು ಚರ್ಚಿಸಲಿದೆ. ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳುವುದಕ್ಕೆ ಅಡ್ಡಿಯಾಗುವ ನಿತ್ಯ ಬದುಕಿನ ಅಂಶಗಳು ಭಾಷಣದ ಕೇಂದ್ರವಸ್ತು.
ಶ್ರೀ ಎ. ಎಸ್. ಕೆ. ವಿ. ಎಸ್. ಶರ್ಮಾ ಅವರು ನಿವೃತ್ತ ವಿಜ್ಞಾನಿಯಾಗಿದ್ದು, ತಮ್ಮ ವಿಜ್ಞಾನ ಲೇಖನಗಳ ಮೂಲಕ ಕಳೆದ 40ಕ್ಕೂ ಹೆಚ್ಚು ವರ್ಷಗಳಿಂದ ಕನ್ನಡ ಓದುಗರಿಗೆ ಸುಪರಿಚಿತರಾಗಿದ್ದಾರೆ. ವಿಜ್ಞಾನ ಸಂವಹನದಲ್ಲಿ ಅಪಾರ ಉತ್ಸಾಹ ಹೊಂದಿರುವ ಇವರು, ವಿವಿಧ ಮಾಧ್ಯಮ ಹಾಗೂ ವಿಧಾನಗಳ ಮೂಲಕ ಎಲ್ಲಾ ವಯೋಮಾನದ ಜನರನ್ನು ತಲುಪಿದ್ದಾರೆ. ಈವರೆಗೆ ಅವರು 4,000ಕ್ಕೂ ಹೆಚ್ಚು ಜನಪ್ರಿಯ ವಿಜ್ಞಾನ ಲೇಖನಗಳನ್ನು ಬರೆದಿದ್ದಾರೆ ಮತ್ತು 960ಕ್ಕೂ ಹೆಚ್ಚು ಪಾಡ್‌ಕಾಸ್ಟ್‌ಗಳನ್ನು ಸಿದ್ಧಪಡಿಸಿದ್ದಾರೆ. ಅಲ್ಲದೆ, ಅನುವಾದ ಮತ್ತು ವಿಜ್ಞಾನ ಬರವಣಿಗೆಯ ಕುರಿತು 100ಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಇವರಿಗೆ ವಿಜಿಎಸ್‌ಟಿ (VGST) ಸಂಸ್ಥೆಯಿಂದ 'ಅತ್ಯುತ್ತಮ ವಿಜ್ಞಾನ ಸಂವಹನಕಾರ' ಪ್ರಶಸ್ತಿ ಸಂದಿದೆ. ಹಾಗೆಯೇ, ಮಕ್ಕಳ ಸಾಹಿತ್ಯ ಮತ್ತು ಜನಪ್ರಿಯ ವಿಜ್ಞಾನದ ಕುರಿತಾದ ಇವರ ಪುಸ್ತಕಗಳು ಕರ್ನಾಟಕ ಸರ್ಕಾರದಿಂದ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿವೆ. ಇವರು ಕನ್ನಡದಲ್ಲಿ ವಿಜ್ಞಾನ ರಂಗಭೂಮಿಯನ್ನು ಉತ್ತೇಜಿಸುವಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಹೊಸ ನಾಟಕಗಳ ರಚನೆಗೆ ನೆರವಾಗಿದ್ದಾರೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಕೈಯಾರೆ ಮಾಡುವ ವಿಜ್ಞಾನ ಚಟುವಟಿಕೆಗಳನ್ನು ನಡೆಸಿಕೊಡುತ್ತಿದ್ದಾರೆ.
ICTSನಲ್ಲಿ ಜಾಗತಿಕ ಮಟ್ಟದ ವೈಜ್ಞಾನಿಕ ಸಂಶೋಧನೆ ಮತ್ತು ಅತ್ಯುತ್ತಮ ಸಮಾವೇಶಗಳು ನಡೆಯುತ್ತವೆ. ವಿಜ್ಞಾನ ನಮ್ಮ ದೈನಂದಿನ ಅನುಭವದಿಂದ ದೂರವಿರುವ ವಿಷಯವಲ್ಲ. ನಮ್ಮ ದೈನಂದಿನ ಜೀವನ ಮತ್ತು ಪ್ರಕೃತಿಯನ್ನು ಅರ್ಥಮಾಡಿಕೊಳ್ಳುವ ಬುನಾದಿಯೇ ವಿಜ್ಞಾನ. ಇಂತಹ ವಿಚಾರಗಳನ್ನು ಸರಳ ಮತ್ತು ಸಂವಾದಾತ್ಮಕ ರೀತಿಯಲ್ಲಿ ಕನ್ನಡದಲ್ಲಿ ಚರ್ಚಿಸುವುದೇ "ದೈನಂದಿನ ವಿಜ್ಞಾನ" ಸರಣಿಯ ಪ್ರಮುಖ ಉದ್ದೇಶ. ಈ ಸರಣಿಯಲ್ಲಿ ನೇರ ಪ್ರಯೋಗಗಳು ಮತ್ತು ಕೈಯಾರೆ ಮಾಡುವ ಪ್ರದರ್ಶನಗಳೂ ಒಳಗೊಂಡಿರುತ್ತವೆ.
“Scientific Temper” is a phrase that is more abstract than science. Although the word scientific is added as a prefix to many things that are distantly related to science, the word remains a mystic to commoners. The talk delves on what that means and why is it important for each of us to develop a scientific temper. The focus will be on issues that prevent us from developing scientific attitude in dealing with routines.
A. S. K. V. S. Sharma is a retired scientist, well known to Kannada readers for the past 4 decades through his articles. He is a passionate experimenter dabbling in all forms of science communication, and for all ages of audience. Sharma has contributed more than 4000 popular science articles, 960 podcasts, taught in more than 100 translation and science writing workshops, has received the best science communicator award from VGST, his books for children's literature and popular science have received prestigious prizes instituted by Government of Karnataka, is actively promoting Science Theatre in Kannada helping create a repository of new plays, and participates in hands on activity programmes for children in schools.
